COVID 19 MSME HELP DESK & SAHAYA VANI
As
everybody is aware, Covid-19 has brought with it lot of misery and hardship to
various segments of economic activity ,
particularly Industries that too MSME’s. Consequently, there is alround shortage of Workforce,
Working Capital, Raw Materials etc., which have largely contributed for the
slowdown of industrial activity particularly MSMEs.
In this connection , in Mysore district alone
during lockdown period more than 26000 Tiny and Small Scale Industries , more than 20000 Self
Employed MSMEs, nearly
165 Export-Oriented Industries and 50 large Industries have closed down their enterprises and there
by during this short period of about 45
days about rupees 4000 crores worth of
business have been lost. In fact many
entrepreneurs have been thinking
that it is better to close down business
instead running them under
continued loss.
Out of total MSMEs in Karnataka only 5% are functioning In
designated areas coming under Karnataka
Industrial Area Development Board (KIADB), Karnataka Small Scale Industries Development
Corporation (KSSIDC) Developed Industrial Areas and Industrial Estates. The rest are scattered and
functioning In Undeveloped Revenue Layouts, and areas falling under Corporation, Municipality And Gram
Panchayats.
In this connection only 10% of MSMEs have been
provided financial assistance by Nationalised banks and State Finance
Institutions and the rest 90% have taken
loans from Private Finance Institutions,
Chit funds and Money Lenders at exorbitant rate of interest.
To support distressed MSMEs on account of lockdown
and to meet fixed expenses like
payment of wages, electric bills, rent etc., the Central Government has announced
20% Additional Bank Loan on the existing loans obtained by these MSMEs from Nationalised banks, at
7.5 % interest. But this assistance is
applicable just for only
10% MSMEs
who have already borrowed from Banks. that too excluding loanees of Karnataka State Finance
Corporation. .
In view of the above situation , the rest 90% of the entrepreneurs
requiring bank loan facility need urgent attention.
Covid-19 MSME HELP DESK create
awareness by organizing Interaction Meetings,
Awareness Programs on various loan schemes of government like Mudra ,
Stand up -India, Startup- India, Digital
India , Make in India, Credit linked
Capital subsidy Scheme (CLCSS) ,Athma Nirbharan
, Bharat Yojana , Prime Minister
Employment Generation Programme (PMEGP) , Karnataka Employment Generation
Programme (KEGP) , Credit Guarentee Fund
Trust(CGFT) Scheme, etc.
Covid-19 MSME HELP DESK also assist MSMEs in getting reimbursement / adjustment of two
months power fixed charges paid by them during lockdown period, from Electricity Companies.
While there are about 43,250
LT-5 and 975 HT 2A
power connections in MSME, only 30% of them are able to get the benefit of two months fixed charge relief so
far. MSME Help Desk provide hand -holding
facilities in obtaining the benefit , even printing ,pre printing
, Post printing , printing press , saw mills, Tailoring shops, Saw Mills, have been denied in getting this Relief since
they are unregistered under the relevant act.
Covid-19 MSME Help Desk is in the process of
submitting a Memorandum to Government to announce one time settlement for
payment of dues payable by MSME’s to KIADB, KSSIDC, KSFC, Local Bodies like Gram Panchayat, Municipalities, City
Corporations, and other statutory bodies
by exempting payment of penalty, interest, and penal interest which will help
MSME during this tough post corona
period. MSMEs help Desk collect the
Representations from MSME’s and forward it
to government for the needful.
ಕೋವಿಡ್ 19 ಎಂ ಎಸ್ ಎಂ ಇ ಸೇವಾ ಕೇಂದ್ರ – ಸಹಾಯ ವಾಣಿ
ಅಗತ್ಯತೆ , ಪ್ರಾಮುಖ್ಯತೆ
ಮತ್ತು ಚಟುವಟಿಕೆಗಳು ಎಂ ಎಸ್ ಎಂ ಇ ಸಹಾಯ ಕೇಂದ್ರ – ಸಹಾಯವಾಣಿ
ಕೋವಿಡ್ 19 ರ ಪ್ರತಿಕೂಲ ಪರಿಣಾಮ ದಿಂದ ನಾಡಿನ ಉದ್ಯಮ ಕ್ಷೇತ್ರ ದುರ್ಬಲ ಮಾರುಕಟ್ಟೆ , ಮಾನವ ಸಂಪನ್ಮೂಲ , ಕಚ್ಚಾ ಸಾಮಗ್ರಿ ಕೊರತೆ ,ಆರ್ಥಿಕ ಮುಗ್ಗಟ್ಟು, ದುಡಿಮೆ ಬಂಡವಾಳ ಕೊರತೆ ಇತ್ಯಾದಿ ಕಾರಣಗಳಿಂದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳು ತೀವ್ರ ಹಿನ್ನಡೆ ಸಾಧಿಸಿವೆ. ಮೈಸೂರು ಜಿಲ್ಲೆ ಯಲ್ಲಿ ಕರೊನಾ ಲಾಕ್ ಡೌನ್ ಒಂದರ 46 ದಿನಗಳ ಕಾಲ 50000 ವಲಸೆ ಕಾರ್ಮಿಕರು , 25000 ದಿನಗೂಲಿ ನೌಕರರು ಒಳಗೊಂಡಂತೆ 3 ಲಕ್ಷ ಜನ ಕಾರ್ಮಿಕರಿಗೆ ಉದ್ಯೋಗ ರಹಿತರಾದರು.
ಈ ಅವಧಿಯಲ್ಲಿ ಮೈಸೂರು ಜಿಲ್ಲೆಯ 26000 ಸೂಕ್ಷ್ಮ ,ಸಣ್ಣ , ಉದ್ಯಮಗಳು , 20000 ಕ್ಕೂ ಹೆಚ್ಚು ಸ್ವಯಂ ಉದ್ಯಮಗಳು , ಗುಡಿ ಕೈಗಾರಿಕೆಗಳು ,165 ರಫ್ತು ಆಧಾರಿತ ಉದ್ಯಮಗಳು ,150 ಭಾರೀ ಮತ್ತು ಮಾದ್ಯಮ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ, ಮುಚಲ್ಪಟ್ಟು ದಿನ ಒಂದಕ್ಕೆ 87 ಕೋಟಿ ರೂ ,46 ದಿನದಲ್ಲಿ 4002 ಕೋಟಿರೂ ವಹಿವಾಟು ನಷ್ಟ 800 ಕೋಟಿ ರೂ ವಸೂಲಾಗದ, ತುಂಬಲಾರದ ಕಡ್ಡಾಯ ವೆಚ್ಚ ಗಳ ನಷ್ಟ ವಾಯಿತು .
ಲಾಕ್ ಡೌನ್ ಓಪನ್ ನಂತರವೂ ಕರೋನ
ಕರಿ ಛಾಯೆ ಯಲ್ಲಿ ಸುಗಮ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ. ಉದ್ಯಮ ನೆಡಸುವುದಕ್ಕಿಂತ ಮುಚ್ಚುವುದೇ ಕ್ಷೇಮ ಎಂಬ ನಿರ್ಣಯ ದಲ್ಲಿ ಉದ್ಯಮ ಕ್ಷೇತ್ರ ವಿದೆ.
* ನಾಡಿನ ಒಟ್ಟು ಎಂ ಎಸ್ ಎಂ ಇ ಗಳಲ್ಲಿ 5% ಉದ್ಯಮಗಳು ಸರ್ಕಾರ ಅಭಿವೃದ್ಧಿಪಡಿಸಿರುವ ಕೆಐಎಎಡಿಬಿ ,ಕೆ ಎಸ್ ಎಸ್ ಐ ಡಿ ಸಿ ಕೈಗಾರಿಕಾ ವಸಾಹತು , ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ . ಉಳಿದ 95 ಪರ್ಸೆಂಟ್ ಉದ್ಯಮಗಳು ಅಭಿವೃದ್ಧಿ ಕಾಣದ ಕೈಗಾರಿಕಾ ಪ್ರದೇಶ ವಲ್ಲದ ಕಂದಾಯ , ನಗರಪಾಲಿಕೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
* 10% ಉದ್ಯಮಗಳು ಮಾತ್ರ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ , ಕೇಂದ್ರ ರಾಜ್ಯ ಸರ್ಕಾರದಿಂದ ಸಹಾಯಧನ ಸೌಲಭ್ಯ ಪಡೆದಿವೆ ಉಳಿದ 90% ಉದ್ಯಮಗಳು ಖಾಸಗಿ ಲೇವಾದೇವಿದಾರರು , ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಚಿಟ್ ಫಂಡ್ ಗಳ ಮೂಲಕ ದುಬಾರಿ ಬಡ್ಡಿಯಲ್ಲಿ ಸಾಲ ಪಡೆದು ಕಾರ್ಯನಿರ್ವಹಿಸುತ್ತಿವೆ.
* ಕೊವಿಡ್ 19 ರ ಲಾಕ್ ಡೌನ್ ಪ್ರತಿಕೂಲದ ಪರಿಣಾಮವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಸಾಲದ ಬಾಕಿ ಮೊತ್ತದ ಮೇಲೆ ಶೇಕಡಾ 20 ರಷ್ಟು ಹೆಚ್ಚುವರಿ ಮೂರು ಲಕ್ಷ ಕೋಟಿ ರೂಪಾಯಿ ಸಾಲವನ್ನು ಸಣ್ಣ ಉದ್ದಿಮೆದಾರರಿಗೆ 7,5% ರಿಯಾಯಿತಿ ಬಡ್ಡಿ ದರದಲ್ಲಿ ನೀಡುವುದಾಗಿ ಪ್ರಕಟಿಸಿ ನೀಡುತ್ತಿದೆ.
ಮುದ್ರಾ , ಸ್ಟಾ0ಡಪ್ ಇಂಡಿಯಾ ,
ಸ್ಟಾರ್ಟ್ ಪ್ ಇಂಡಿಯಾ , ಸಿ ಎಲ್ ಸಿ ಎಸ್ ಎಸ್ ,
ಡಿಜಿಟಲ್ ಇಂಡಿಯಾ ,ಅತ್ಮನಿರ್ಭರ್ ಯೋಜನೆ ,
ಪಿ ಎಂ ಇ ಜಿ ಪಿ , ಕೆಇಜಿಪಿ ,
ಸಿ ಜಿ ಟಿ ಎಫ್ ಟಿ ಎಂ ಎಸ್ ಇ ಯೋಜನೆಗಳನ್ನು ಕಾರ್ಯಗತ ಮಾಡುವ ಸಲುವಾಗಿ ಸಾಲ ಯೋಜನೆಗಳ ಅರಿವು ಮಾಡಿಸುವ ಕಾರ್ಯಕ್ರಮ , ಸಾಲಮೇಳ , ಬ್ಯಾಂಕ್ ಗಳು ಹಾಗೂ ಸಾಲ ಅಗತ್ಯತೆ ಇರುವ ಉದ್ಯಮಿಗಳ ಸಮಾಲೋಚನೆ ಸಭೆ , ಚರ್ಚೆ ನಡೆಸಲು
ಯು ಎನ್ ಡಿ ಪಿ ಪ್ರಾಯೋಜಿತ ಎಮ್ ಎಸ್ ಎಂ ಇ ಹೆಲ್ಪ್ ಡೆಸ್ಕ್ ಹಾಗೂ ಸಹಾಯವಾಣಿ ಅವಕಾಶ ಕಲ್ಪಿಸಲಿದೆ.
ಕೇಂದ್ರ ಸರ್ಕಾರದ ಮತ್ತೊಂದು ಕೋವಿಡ್ 19 ಲಾಕ್ ಡೌನ್ ಅವದಿ ಪ್ರತಿಕೂಲ ಪರಿಣಾಮದ ಪರಿಹಾರ ಯೋಜನೆ ಎಂ ಎಸ್ ಎಂ ಇ ಘಟಕಗಳಿಗೆ ಎರಡು ತಿಂಗಳ ವಿದ್ಯುತ್ ಕಡ್ಡಾಯ ಶುಲ್ಕ ಮನ್ನಾ ಯೋಜನೆ .
ದೇಶದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಕೇಂದ್ರ ಸರ್ಕಾರ ಈ ಪರಿಹಾರ ಹಣ ವನ್ನು ನೀಡಲಿದೆ ಯಾದ್ದರಿಂದ
ವಿದ್ಯುತ್ ಕಂಪನಿಗಳಿಗೆ ಯಾವುದೇ ನಷ್ಟ ವಾಗುವುದಿಲ್ಲಾ .
ಮೈಸೂರು ವಲಯದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ 43250. ಎಲ್ ಟಿ 50 ಹಾಗೂ 975 ಹೆಚ್ ಟಿ 2 ಎ ಸಂಪರ್ಕಗಳಿವೆ ಆದರೆ ಪ್ರೀ ಪ್ರೆಸ್ ,ಪೋಸ್ಟ್ ಪ್ರೆಸ್,ಪ್ರಿಂಟಿಂಗ್ ಉದ್ಯಮ , ಫ್ಲ್ಲೋರ್ ಮಿಲ್, ದೋಬಿ,ಟೈಲರಿಂಗ್ ಇತ್ಯಾದಿ
ಬಹುತೇಕ ಎಲ್ ಟಿ 5 ರಲ್ಲಿ ರಬೇಕಾದ ಸಂಪರ್ಕಗಳು ಎಲ್ ಟಿ 3 ವಾಣಿಜ್ಯ ವರ್ಗದಲ್ಲಿದೆ ಯಾದ್ದರಿಂದ ಈ ಗ್ರಾಹಕರಿಗೆ ಎರಡು ತಿಂಗಳ ವಿದ್ಯುತ್ ಕಡ್ಡಾಯ ಶುಲ್ಕ ಮನ್ನಾ ಸೌಲಭ್ಯ ದೊರೆಯುತ್ತಿಲ್ಲಾ.
01-07-2020 ರವರೆಗೆ ಉದ್ಯಮ ರಿಜಿಸ್ಟೇಷನ್ ಕಡ್ಡಾಯ ವಾಗಿರಲಿಲ್ಲವಾದ್ದರಿಂದ ಬಹುತೇಕ ಉದ್ಯಮಗಳು ಉದ್ಯಮ ನೊಂದಾಣಿ ಪಡೆಯದಕಾರಣ ವಿದ್ಯುತ್ ಶುಲ್ಕ ಮನ್ನಾ ಯೋಜನೆಯಿಂದ ವಂಚಿತವಾಗಿವೆ.
ಒಟ್ಟಾರೆ ಇಂದಿನವರೆಗೆ 30 % ಉದ್ಯಮಗಳು ಮಾತ್ರ ವಿದ್ಯುತ್ ಮನ್ನಾ ಸೌಲಭ್ಯ ಪಡೆದಿದ್ದು ಉಳಿದ 70 ಪರ್ಸೆಂಟ್ ಉದ್ಯಮಗಳಿಗೆ ಈ ಸೌಲಭ್ಯ ದೊರಕಿಸಿಕೊಡುವ ಜವಾಬ್ದಾರಿ ಎಂಎಸ್ಎಂಇ ಸಹಾಯ ಕೇಂದ್ರ – ಸಹಾಯವಾಣಿ ಹೊರಲಿದೆ .
ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ರವರನ್ನು ಮೈಸೂರು ಕೈಗಾರಿಕೆಗಳ ಸಂಘ ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ ಮೇರೆಗೆ ಮೈಸೂರು ಕೈಗಾರಿಕೆಗಳ ಸಂಘಕ್ಕೆ ಸೆಸ್ಕ್ ಹಿಂಬರಹವನ್ನು ನೀಡಿದೆಯಾದರೂ ಸಮಸ್ಯೆ ಬಗೆಹರಿಸಲು ಸರ್ಕಾರದ ಇಂಧನ ಇಲಾಖೆ ಮನ ವಿ ಸಲ್ಲಿಸುವುದು ಅನಿವಾರ್ಯವಾಗಿದ್ದು ಎಂ ಎಸ್ ಎಂ ಇ ಉದ್ಯಮ ದಾರರಿಂದ ದೂರು ,ಮನವಿ ಸ್ವೀಕರಿಸಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಯವರೊಡನೆ ಸಬೆ ನಡೆಸುವ ಸಿದ್ದತೆ ಯಲ್ಲಿ ಮೈಸೂರು ಕೈಗಾರಿಕೆಗಳ ಸಂಘ , ಎ ಎಂ ಎಸ್ ಎಂ ಇ ಕೌನ್ಸಿಲ್ ಮುನ್ನೆಡೆದಿದೆ .
ಕೊವಿದ್ 19 ಕರೋನಾ ಪರಿಸರದ ಕ್ಲಿಷ್ಟ ಸಮಯದಲ್ಲಿ ಅನಗತ್ಯ ಜನಸಂಪರ್ಕ , ಕಚೇರಿ ಸಂಪರ್ಕ ಕಡಿಮೆಗೊಳಿಸುವುದು ಅನಿವಾರ್ಯವಾಗಿದ್ದು ಆಡಳಿತರೂಢ ಅಧಿಕಾರಿಗಳು , ಸಿಬ್ಬಂದಿಗಳು ಉದ್ಯಮ ಸಂಸ್ಥೆ ಗಳ ಮನವಿ ದೂರುಗಳ ಬಗ್ಗೆ ಮಿಂಚಂಚೆ ವಾಟ್ಸಾಪ್ ಎಸ್ಎಂಎಸ್ ಸಂದೇಶಗಳನ್ನು ಪರಿಗಣಿಸಿ ತುರ್ತು ಕ್ರಮ ಕೈಗೊಂಡು ದೂರವಾಣಿ ಮೂಲಕವೂ ತಿಳಿಸುವ ವ್ಯವಸ್ಥೆಯಾಗಬೇಕು . ಆ ಮೂಲಕ ಡಿಜಿಟಲ್ ಇಂಡಿಯಾ ಸಾಕಾರಗೊಳಿಸುವು ದರಿಂದ ಉದ್ಯಮ ಕ್ಷೇತ್ರದ ಪ್ರಗತಿಗೆ ಯಾಗುವುದು .
ಲಾಕ್ ಡೌನ್ ನಂತರ ಸಾಲ ಪಡೆಯುವ ಉದ್ಯಮಗಳು ಘಟಕದ ಬಾಕಿ ಇರುವ ಕೆಐಎಎಡಿಬಿ ನಿರ್ವಹಣಾ ವೆಚ್ಚ ,ಗ್ರಾಮ ಪಂಚಾಯಿತಿ ,ಪುರಸಭೆ , ನಗರಪಾಲಿಕೆ ತೆರಿಗೆಗಳು, ಕಂದಾಯ , ನೀರು ಬಳಕೆ ಶುಲ್ಕ ಇತ್ಯಾದಿಗಳನ್ನು ಪಾವತಿ ಮಾಡಿದ ನಂತರವೇ ಸಾಲ ಪಡೆಯಲು ಸಾಧ್ಯವಾಗು ವುದರಿಂದ ಎಲ್ಲಾ ಬಾಕಿ ಪಾವತಿಗೆ ಒಮ್ಮೆ ತೀರುವಳಿ ಯೋಜನೆ ಜಾರಿಗೊಳಿಸಿ ಬಡ್ಡಿ , ಚಕ್ರಬಡ್ಡಿ ಮನ್ನಾ ಆದೇಶವನ್ನು ಹೊರಡಿಸಬೇಕಾಗಿದೆ .
ಇದರಿಂದ ವಿವಿಧ ಇಲಾಖೆಗಳ ಬಾಕಿವಸೂಲಿ ಆಗುವುದಲ್ಲದೆ ಉದ್ಯಮಗಳು ಸಾಲ ಪಡೆಯಲು ಸಾಧ್ಯ ವಾಗುವುದು. ಈ ಸಂಬಂಧ ಉದ್ಯಮಿಗಳಿಂದ ಅರ್ಜಿ ಸ್ವೀಕರಿಸಿ ಸರ್ಕಾರದ ಅದೇಶ ಪಡೆಯುವ ಪ್ರಕ್ರಿಯೆ ಯಲ್ಲಿ ಎಂ ಎಸ್ ಎಂ ಇ ಸಹಾಯ ಕೇಂದ್ರ ತೊಡಗುವುದು.
ರಾಜ್ಯ ಸರ್ಕಾರದಲ್ಲಿ ಜಾರಿ ಇರುವ ಸಕಾಲ , ಮಾಹಿತಿ ಹಕ್ಕು , ಕೈಗಾರಿಕಾ ಅದಾಲತ್, ಕೈಗಾರಿಕಾ ಸ್ಪಂದನ ,ಕುಂದುಕೊರತೆ ನಿವಾರಣಾ ವ್ಯವಸ್ಥೆ ಗಳ ಪರಿಣಾಮ ಕಾರಿಜಾರಿಗಾಗಿ
ಯುಎನ್ ಡಿಪಿ , ಎಂಎಸ್ಎಂಇ ಸಹಾಯ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರುವುದು.
31-03-2021 ರೊಳಗೆ ದೇಶದ ಎಲ್ಲಾ ಉದ್ಯಮಗಳು ಖಡ್ಡಾಯವಾಗಿ ಉದ್ಯಮ
ನೊಂದಾಣಿ ಮಾಡಲು . ಕೆಐಎಎಡಿಬಿ ,ಕೆ ಎಸ್ ಎಸ್ ಐ ಡಿ ಸಿ ,ಕೆ ಎಸ್ ಎಫ್ ಸಿ ಗಳ ಬಹು ವರ್ಷಗಳ ಸಮಸ್ಸೆ ಪರಿಹಾರಕ್ಕಾಗಿ ವೇಬಿನಾರ್ ಮತ್ತು ಸಮಾಲೋಚನೆ ಸಭೆ ,ಅದಾಲತ್ ನಲ್ಲಿ ಭಾಗವಹಿಸಲು .
ಇ ಎಸ್ ಐ ಸೌಲಭ್ಯ ಗಳನ್ನು ಖಾಸಾಗಿ ಆಸ್ಪತ್ರೆ ಗಳಲ್ಲಿ ಪಡೆಯುವುದು , ಕೋವಿಡ್ 19 ಪಿ ಎಫ್ ನೆರವು ಇತ್ಯಾದಿ ಎಲ್ಲಾ ವಿಧವಾದ ಸೇವೆಗಳಿಗಾಗಿ ,
ಹಾಲೀ ಉದ್ಯಮಗಳ ಪೂರ್ಣ ಪ್ರಮಾಣದ ಲ್ಲಿ
ಪುನಾರಂಭಕ್ಕೆ ಹಾಗೂ ಹೊಸ ಉದ್ಯಮ ಪ್ರರಾಂಭ ಕ್ಕೆ ಅಗತ್ಯವಾದ ಮಾಹಿತಿ , ಮಾರ್ಗದರ್ಶನ ನೀಡಲು ವಿಷಯ ತಜ್ಞರ ಮೂಲಕ , ನಾಲೆಡ್ಜ್ ಪಾರ್ಟ್ನರ್ ಸಂಸ್ಥೆ ಗಳ ಸೇವೆ ಪಡೆಯಲು ಎಂ ಎಸ್ ಎಂ ಇ ಸೇವಾ ಕೇಂದ್ರಕ್ಕೆ ಈ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕು .
ಯುನೈಟೆಡ್ ನೇಷನ್ ಡವಲಪ್ಮೆಂಟ್ ಪ್ರೋಗ್ರಾಂ ನಿಂದ ಪ್ರಾಯೋಜಿತವಾದ
ಎಂ ಎಸ್ ಎಂ ಇ ಸೇವಾ ಕೇಂದ್ರ –ಸಹಾಯವಾಣಿಯು ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ , ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರಗಳು ಮತ್ತು ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ತಿನ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ .
ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪರಿಣಿತ ವಿಷಯತಜ್ಞರು , ತಾಂತ್ರಿಕ ತಜ್ಞರು, ಹಣಕಾಸು ತಜ್ಞರು , ಬ್ಯಾಂಕಿಂಗ್ ತಜ್ಞರು , ಉದ್ಯಮಪತಿಗಳು, ಹಿರಿಯ ಅಧಿಕಾರಿಗಳು ಇರುವ ನಾಲೆಡ್ಜೆ ಪಾರ್ಟ್ನರ್ ಸಂಸ್ಥೆಗಳಾದ ಉಬುಂಟು , ವಿಷನ್ ಕರ್ನಾಟಕ ಫೌಂಡೇಶನ್ ಮತ್ತು ಗೇಮ್ ಸಂಸ್ಥೆಗಳು ಮಾಹಿತಿ , ಮಾರ್ಗದರ್ಶನ ನೀಡುತ್ತಿವೆ .
COVID 19 MSME HELP DESK & SAHAYA VAANI
ಕೊವಿದ್ 19 ಎಂ ಎಸ್ ಎಂ ಇ ಸೇವಾ ಕೇಂದ್ರ ಮತ್ತು ಸಹಾಯ ವಾಣಿ
MSME Assistance, Guidance, Information and Grievances Reddressal Application
ಎಂ.ಎಸ್.ಎಂ.ಇ ನೆರವು ಯೋಜನೆಗಳು , ಮಾರ್ಗದರ್ಶನ, ಮಾಹಿತಿ ಮತ್ತು ಕುಂದುಕೊರತೆಗಳ ಪರಿಹಾರ ಅರ್ಜಿ .
Copyright © 2023 | WordPress Theme by MH Themes